ಆಹ್ವಾನ ಕೋಡ್ ಅಥವಾ ಲಿಂಕ್ ಮೂಲಕ ಗುಂಪಿಗೆ ಸೇರುವುದು ಹೇಗೆ?

ಯಾರಾದರೂ ನಿಮಗೆ ಆಹ್ವಾನ ಲಿಂಕ್ ಕಳುಹಿಸಿದ್ದರೆ, ಅದನ್ನು ನಿಮ್ಮ ಫೋನ್‌ನಲ್ಲಿ ತೆರೆಯಿರಿ, SplitEase ನಿಮ್ಮನ್ನು ಗುಂಪಿಗೆ ಸೇರಿಸುತ್ತದೆ. ನೀವು ಇನ್ನೂ ಸೈನ್ ಇನ್ ಮಾಡಿಲ್ಲದಿದ್ದರೆ, ಸೈನ್ ಇನ್ ಮಾಡಿದ ತಕ್ಷಣ ಸೇರುತ್ತೀರಿ.

ಹಂತಗಳು

  1. ಮುಖಪುಟ (Home) ಟ್ಯಾಬ್‌ನಲ್ಲಿ, ಸೇರಿ (Join) ಟ್ಯಾಪ್ ಮಾಡಿ.
  2. ಆಹ್ವಾನ ಕೋಡ್ ಟೈಪ್ ಮಾಡಿ ಮತ್ತು ಗುಂಪಿಗೆ ಸೇರಿ (Join Group) ಟ್ಯಾಪ್ ಮಾಡಿ.
  3. ಅಥವಾ ಗುಂಪಿನ QR ಕೋಡ್ ಸ್ಕ್ಯಾನ್ ಮಾಡಲು QR ಕೋಡ್ ಸ್ಕ್ಯಾನ್ ಮಾಡಿ (Scan a QR code) ಟ್ಯಾಪ್ ಮಾಡಿ, ಲಿಂಕ್ ನಕಲಿಸಿದ್ದರೆ ಆಹ್ವಾನ ಲಿಂಕ್ ಅಂಟಿಸಿ (Paste an invite link) ಟ್ಯಾಪ್ ಮಾಡಿ.

ಕೋಡ್ ಕೆಲಸ ಮಾಡದಿದ್ದರೆ, ಅದರ ಅವಧಿ ಮುಗಿದಿರಬಹುದು. ನಿಮ್ಮನ್ನು ಆಹ್ವಾನಿಸಿದವರಲ್ಲಿ ಹೊಸ ಕೋಡ್ ಕೇಳಿ.

SplitEase ಆ್ಯಪ್ ಇನ್ನೂ ಕನ್ನಡದಲ್ಲಿ ಲಭ್ಯವಿಲ್ಲ. ಆವರಣದಲ್ಲಿರುವ ಬಟನ್ ಹೆಸರುಗಳು ಪರದೆಯ ಮೇಲೆ ನಿಮಗೆ ಇಂಗ್ಲಿಷ್‌ನಲ್ಲಿ ಕಾಣಿಸುವಂಥವು.

ಸಂಬಂಧಿತ ಪ್ರಶ್ನೆಗಳು

ಇನ್ನೂ ಸಹಾಯ ಬೇಕೇ?

ನಮಗೆ ಬರೆಯಿರಿ, SplitEase ತಂಡದ ಒಬ್ಬರು ಉತ್ತರಿಸುತ್ತಾರೆ.

ಬೆಂಬಲವನ್ನು ಸಂಪರ್ಕಿಸಿ
ಭಾಷೆ: ಕನ್ನಡ