ಧ್ವನಿಯ ಮೂಲಕ ವೆಚ್ಚ ಸೇರಿಸುವುದು ಹೇಗೆ?
ಧ್ವನಿ ವೆಚ್ಚಗಳ ಮೂಲಕ, ಟೈಪ್ ಮಾಡುವ ಬದಲು ವೆಚ್ಚವನ್ನು ಜೋರಾಗಿ ವಿವರಿಸಬಹುದು. ಇದು SplitEase+ ನ ಭಾಗ.
ಹಂತಗಳು
- + ಬಟನ್ ಟ್ಯಾಪ್ ಮಾಡಿ, ನಂತರ ಧ್ವನಿ (Voice) ಟ್ಯಾಪ್ ಮಾಡಿ.
- ಮೈಕ್ರೋಫೋನ್ ಟ್ಯಾಪ್ ಮಾಡಿ ಮೊತ್ತ, ಅದು ಯಾವುದಕ್ಕಾಗಿ ಮತ್ತು ಹೇಗೆ ಹಂಚಬೇಕು ಎಂದು ಹೇಳಿ, ಉದಾಹರಣೆಗೆ: "Dinner, 1200, split equally".
- SplitEase ತುಂಬಿದ್ದನ್ನು ಪರಿಶೀಲಿಸಿ ಹಂಚಿಕೆ ಪರಿಶೀಲಿಸಿ ಉಳಿಸಿ (Review split and save) ಟ್ಯಾಪ್ ಮಾಡಿ.
- ಅಗತ್ಯವಿರುವ ಬದಲಾವಣೆಗಳನ್ನು ಮಾಡಿ ಉಳಿಸಿ (Save) ಟ್ಯಾಪ್ ಮಾಡಿ.
ರೆಕಾರ್ಡಿಂಗ್ 30 ಸೆಕೆಂಡುಗಳ ನಂತರ ನಿಲ್ಲುತ್ತದೆ. ಧ್ವನಿ ವೆಚ್ಚಗಳು ಸದ್ಯಕ್ಕೆ ಇಂಗ್ಲಿಷ್ ಮಾತ್ರ ಅರ್ಥಮಾಡಿಕೊಳ್ಳುತ್ತವೆ.
ಧ್ವನಿಯ ಮೂಲಕ ವೆಚ್ಚ ಸೇರಿಸುವ ಮೊದಲು ನಿಮ್ಮಲ್ಲಿ ಕನಿಷ್ಠ ಒಂದು ಗುಂಪು ಇರಬೇಕು.
SplitEase ಆ್ಯಪ್ ಇನ್ನೂ ಕನ್ನಡದಲ್ಲಿ ಲಭ್ಯವಿಲ್ಲ. ಆವರಣದಲ್ಲಿರುವ ಬಟನ್ ಹೆಸರುಗಳು ಪರದೆಯ ಮೇಲೆ ನಿಮಗೆ ಇಂಗ್ಲಿಷ್ನಲ್ಲಿ ಕಾಣಿಸುವಂಥವು.