ರಸೀದಿ ಸ್ಕ್ಯಾನ್ ಮಾಡಿ ವೆಚ್ಚ ಸೇರಿಸುವುದು ಹೇಗೆ?
ರಸೀದಿ ಸ್ಕ್ಯಾನಿಂಗ್ ಬಿಲ್ನಿಂದ ಒಟ್ಟು ಮೊತ್ತ ಮತ್ತು ವಿವರಗಳನ್ನು ಓದುತ್ತದೆ, ಆದ್ದರಿಂದ ನೀವು ಟೈಪ್ ಮಾಡಬೇಕಿಲ್ಲ. ಇದು SplitEase+ ನ ಭಾಗ.
ಹಂತಗಳು
- + ಬಟನ್ ಟ್ಯಾಪ್ ಮಾಡಿ, ನಂತರ ಸ್ಕ್ಯಾನ್ (Scan) ಟ್ಯಾಪ್ ಮಾಡಿ.
- ಪೂರ್ತಿ ಬಿಲ್ನ ಫೋಟೋ ತೆಗೆಯಿರಿ, ಅಥವಾ ನಿಮ್ಮಲ್ಲಿ ಈಗಾಗಲೇ ಇರುವ ಫೈಲ್ ಬಳಸಲು ಗ್ಯಾಲರಿ (Library) ಅಥವಾ PDF ಆಯ್ಕೆಮಾಡಿ.
- SplitEase ಕಂಡುಹಿಡಿದ ವಿವರಗಳನ್ನು ಪರಿಶೀಲಿಸಿ ಬಳಸಿ (Use) ಟ್ಯಾಪ್ ಮಾಡಿ.
- ಯಾರು ಪಾವತಿಸಿದರು ಮತ್ತು ಹೇಗೆ ಹಂಚಲಾಗಿದೆ ಎಂದು ಪರಿಶೀಲಿಸಿ, ನಂತರ ಉಳಿಸಿ (Save) ಟ್ಯಾಪ್ ಮಾಡಿ.
ಚಿತ್ರವನ್ನು ಓದಲು ಅದನ್ನು SplitEase ಗೆ ಅಪ್ಲೋಡ್ ಮಾಡಲಾಗುತ್ತದೆ. ಅದನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂದು ತಿಳಿಯಲು ನಮ್ಮ ಗೌಪ್ಯತಾ ನೀತಿ ನೋಡಿ.
ಸ್ಕ್ಯಾನ್ಗಳಲ್ಲಿ ತಪ್ಪುಗಳಾಗಬಹುದು. ಉಳಿಸುವ ಮೊದಲು ಯಾವಾಗಲೂ ಮೊತ್ತವನ್ನು ಪರಿಶೀಲಿಸಿ.
SplitEase ಆ್ಯಪ್ ಇನ್ನೂ ಕನ್ನಡದಲ್ಲಿ ಲಭ್ಯವಿಲ್ಲ. ಆವರಣದಲ್ಲಿರುವ ಬಟನ್ ಹೆಸರುಗಳು ಪರದೆಯ ಮೇಲೆ ನಿಮಗೆ ಇಂಗ್ಲಿಷ್ನಲ್ಲಿ ಕಾಣಿಸುವಂಥವು.