SplitEase+

ಗುಂಪಿನ ವೆಚ್ಚಗಳನ್ನು ರಫ್ತು ಮಾಡುವುದು ಹೇಗೆ?

ನಿಮ್ಮ ದಾಖಲೆಗಳಿಗಾಗಿ ಅಥವಾ ಹಂಚಿಕೊಳ್ಳಲು, ಗುಂಪಿನ ವೆಚ್ಚಗಳನ್ನು SplitEase ನಿಂದ ಫೈಲ್ ಆಗಿ ತೆಗೆದುಕೊಳ್ಳಬಹುದು. ಇದು SplitEase+ ನ ಭಾಗ.

ಹಂತಗಳು

  1. ಗುಂಪನ್ನು ತೆರೆಯಿರಿ, ನಂತರ ಗುಂಪಿನ ಸೆಟ್ಟಿಂಗ್‌ಗಳು (Group settings) ತೆರೆಯಿರಿ.
  2. ಲೆಡ್ಜರ್ ರಫ್ತು ಮಾಡಿ (Export ledger) ಟ್ಯಾಪ್ ಮಾಡಿ.
  3. PDF, CSV ಅಥವಾ Excel ಆಯ್ಕೆಮಾಡಿ. ಚುಕ್ತಾಗಳನ್ನು ಸೇರಿಸಿ (Include settlements) ಆನ್ ಅಥವಾ ಆಫ್ ಮಾಡಿ.
  4. ರಫ್ತು ಮಾಡಿ (Export) ಟ್ಯಾಪ್ ಮಾಡಿ, ಫೈಲ್ ಸಿದ್ಧವಾಗುವವರೆಗೆ ಕಾಯಿರಿ, ನಂತರ ಅದನ್ನು ಉಳಿಸಿ ಅಥವಾ ಹಂಚಿಕೊಳ್ಳಿ.

ಫೈಲ್ ಅನ್ನು ಒಮ್ಮೆ ಮಾತ್ರ ಡೌನ್‌ಲೋಡ್ ಮಾಡಬಹುದು. ಪರದೆ ಮುಚ್ಚುವ ಮೊದಲು ಅದನ್ನು ಉಳಿಸಿ ಅಥವಾ ಕಳುಹಿಸಿ.

SplitEase ಆ್ಯಪ್ ಇನ್ನೂ ಕನ್ನಡದಲ್ಲಿ ಲಭ್ಯವಿಲ್ಲ. ಆವರಣದಲ್ಲಿರುವ ಬಟನ್ ಹೆಸರುಗಳು ಪರದೆಯ ಮೇಲೆ ನಿಮಗೆ ಇಂಗ್ಲಿಷ್‌ನಲ್ಲಿ ಕಾಣಿಸುವಂಥವು.

ಸಂಬಂಧಿತ ಪ್ರಶ್ನೆಗಳು

ಇನ್ನೂ ಸಹಾಯ ಬೇಕೇ?

ನಮಗೆ ಬರೆಯಿರಿ, SplitEase ತಂಡದ ಒಬ್ಬರು ಉತ್ತರಿಸುತ್ತಾರೆ.

ಬೆಂಬಲವನ್ನು ಸಂಪರ್ಕಿಸಿ
ಭಾಷೆ: ಕನ್ನಡ