ಪುನರಾವರ್ತಿತ ವೆಚ್ಚವನ್ನು ಹೊಂದಿಸುವುದು ಹೇಗೆ?
ಪುನರಾವರ್ತಿತ ವೆಚ್ಚವನ್ನು ಅದರ ದಿನಾಂಕದಂದು, ನೀವು ಹೊಂದಿಸಿದಂತೆ ಹಂಚಿ, ಸ್ವಯಂಚಾಲಿತವಾಗಿ ಗುಂಪಿಗೆ ಸೇರಿಸಲಾಗುತ್ತದೆ. ಇದು SplitEase+ ನ ಭಾಗ.
ಹಂತಗಳು
- ಗುಂಪನ್ನು ತೆರೆಯಿರಿ, ನಂತರ ಗುಂಪಿನ ಸೆಟ್ಟಿಂಗ್ಗಳು (Group settings) ತೆರೆಯಿರಿ.
- ಪುನರಾವರ್ತಿತ ವೆಚ್ಚಗಳು (Recurring expenses) ಟ್ಯಾಪ್ ಮಾಡಿ, ನಂತರ ಸೇರಿಸಿ (Add) ಟ್ಯಾಪ್ ಮಾಡಿ.
- ಮೊತ್ತ, ಯಾರು ಪಾವತಿಸುತ್ತಾರೆ ಮತ್ತು ಹೇಗೆ ಹಂಚಬೇಕು ಎಂದು ನಮೂದಿಸಿ, ನಂತರ ಎಷ್ಟು ಬಾರಿ ಪುನರಾವರ್ತನೆ ಆಗಬೇಕು ಎಂದು ಆಯ್ಕೆಮಾಡಿ: ಪ್ರತಿದಿನ, ಪ್ರತಿ ವಾರ, ಪ್ರತಿ ತಿಂಗಳು ಅಥವಾ ಪ್ರತಿ ವರ್ಷ.
- ಉಳಿಸಿ (Save) ಟ್ಯಾಪ್ ಮಾಡಿ.
ಒಂದು ಬಾರಿ ಬಿಟ್ಟುಬಿಡಲು, ಪುನರಾವರ್ತಿತ ವೆಚ್ಚವನ್ನು ತೆರೆದು ಮುಂದಿನ ಬಾರಿ ಬಿಟ್ಟುಬಿಡಿ (Skip the next occurrence) ಟ್ಯಾಪ್ ಮಾಡಿ. ಅದರ ನಂತರ ವೇಳಾಪಟ್ಟಿ ಎಂದಿನಂತೆ ಮುಂದುವರಿಯುತ್ತದೆ.
SplitEase ಆ್ಯಪ್ ಇನ್ನೂ ಕನ್ನಡದಲ್ಲಿ ಲಭ್ಯವಿಲ್ಲ. ಆವರಣದಲ್ಲಿರುವ ಬಟನ್ ಹೆಸರುಗಳು ಪರದೆಯ ಮೇಲೆ ನಿಮಗೆ ಇಂಗ್ಲಿಷ್ನಲ್ಲಿ ಕಾಣಿಸುವಂಥವು.