ನನಗೆ SplitEase ಪರಿಶೀಲನಾ ಕೋಡ್ ಬಂದಿಲ್ಲ
ನಿಮ್ಮ ಫೋನ್ ಸಂಖ್ಯೆಗೆ SMS ಮೂಲಕ ಕಳುಹಿಸಲಾದ 6 ಅಂಕಿಯ ಕೋಡ್ ಬಳಸಿ SplitEase ನಿಮ್ಮನ್ನು ಸೈನ್ ಇನ್ ಮಾಡುತ್ತದೆ.
ಹಂತಗಳು
- ಪರದೆಯಲ್ಲಿರುವ ಸಂಖ್ಯೆ ಸರಿಯಾಗಿದೆಯೇ ಎಂದು ಪರಿಶೀಲಿಸಿ. ಇಲ್ಲದಿದ್ದರೆ, ಬದಲಾಯಿಸಿ (Change) ಟ್ಯಾಪ್ ಮಾಡಿ ಮತ್ತೆ ನಮೂದಿಸಿ.
- ಒಂದು ನಿಮಿಷ ಕಾಯಿರಿ. ನಿಮ್ಮ ನೆಟ್ವರ್ಕ್ನಿಂದ ಸಂದೇಶಗಳು ತಡವಾಗಬಹುದು.
- ಬರಲಿಲ್ಲವೇ? (Didn't get it?) ಟ್ಯಾಪ್ ಮಾಡಿ. 60 ಸೆಕೆಂಡುಗಳ ನಂತರ ಈಗ ಮರುಕಳುಹಿಸಿ (Resend now) ಲಭ್ಯವಾಗುತ್ತದೆ. ಹೊಸ ಕೋಡ್ ಪಡೆಯಲು ಅದನ್ನು ಟ್ಯಾಪ್ ಮಾಡಿ.
- ನಿಮ್ಮ ಫೋನ್ಗೆ ಸಿಗ್ನಲ್ ಇದೆಯೇ ಮತ್ತು ಅಪರಿಚಿತ ಕಳುಹಿಸುವವರ ಸಂದೇಶಗಳನ್ನು ನಿರ್ಬಂಧಿಸುತ್ತಿಲ್ಲವೇ ಎಂದು ಖಚಿತಪಡಿಸಿಕೊಳ್ಳಿ.
ಹಲವು ಬಾರಿ ಪ್ರಯತ್ನಿಸಿದ ನಂತರ, ಮತ್ತೆ ಪ್ರಯತ್ನಿಸುವ ಮೊದಲು ಕೆಲವು ನಿಮಿಷ ಕಾಯುವಂತೆ ಕೇಳಲಾಗುತ್ತದೆ.
ಇನ್ನೂ ಕೋಡ್ ಬಂದಿಲ್ಲವೇ? ನೀವು ಬಳಸಿದ ಫೋನ್ ಸಂಖ್ಯೆಯೊಂದಿಗೆ ನಮ್ಮನ್ನು ಸಂಪರ್ಕಿಸಿ.
SplitEase ಆ್ಯಪ್ ಇನ್ನೂ ಕನ್ನಡದಲ್ಲಿ ಲಭ್ಯವಿಲ್ಲ. ಆವರಣದಲ್ಲಿರುವ ಬಟನ್ ಹೆಸರುಗಳು ಪರದೆಯ ಮೇಲೆ ನಿಮಗೆ ಇಂಗ್ಲಿಷ್ನಲ್ಲಿ ಕಾಣಿಸುವಂಥವು.