ಯಾರೊಂದಿಗಾದರೂ ಲೆಕ್ಕ ಚುಕ್ತಾ ಮಾಡುವುದು ಹೇಗೆ?
ಯಾರು ಯಾರಿಗೆ ಎಷ್ಟು ಕೊಡಬೇಕು ಎಂಬುದನ್ನು SplitEase ಟ್ರ್ಯಾಕ್ ಮಾಡುತ್ತದೆ, ಆದರೆ ಪಾವತಿಗಳನ್ನು ನಿರ್ವಹಿಸುವುದಿಲ್ಲ. ನೀವು ಸಾಮಾನ್ಯವಾಗಿ ಪಾವತಿಸುವಂತೆ ಇನ್ನೊಬ್ಬರಿಗೆ ಪಾವತಿಸಿ, ನಂತರ ಇಬ್ಬರ ಬಾಕಿಯೂ ನವೀಕರಣಗೊಳ್ಳುವಂತೆ ಆ್ಯಪ್ನಲ್ಲಿ ದಾಖಲಿಸಿ.
ಹಂತಗಳು
- ಗುಂಪನ್ನು ತೆರೆದು ಲೆಕ್ಕ ಚುಕ್ತಾ ಮಾಡಿ (Settle up) ಟ್ಯಾಪ್ ಮಾಡಿ.
- ನೀವು ಯಾರಿಗಾದರೂ ಪಾವತಿಸಿದ್ದರೆ, ಅವರ ಹೆಸರಿನ ಪಕ್ಕದಲ್ಲಿ ಪಾವತಿ ದಾಖಲಿಸಿ (Record payment) ಟ್ಯಾಪ್ ಮಾಡಿ, ಮೊತ್ತ ಪರಿಶೀಲಿಸಿ ಮತ್ತು ದೃಢೀಕರಿಸಿ. ನೀವು ಕೊಡಬೇಕಾದುದರ ಒಂದು ಭಾಗವನ್ನೂ ದಾಖಲಿಸಬಹುದು.
- ಯಾರಾದರೂ ನಿಮಗೆ ಪಾವತಿಸಿದ್ದರೆ, ಅವರ ಹೆಸರಿನ ಪಕ್ಕದಲ್ಲಿ ಸ್ವೀಕರಿಸಲಾಗಿದೆ ಎಂದು ಗುರುತಿಸಿ (Mark as received) ಟ್ಯಾಪ್ ಮಾಡಿ ಮತ್ತು ದೃಢೀಕರಿಸಿ.
ಹಿಂದಿನ ಪಾವತಿಗಳನ್ನು ನೋಡಲು, ಅದೇ ಪರದೆಯಲ್ಲಿ ಇತಿಹಾಸ (History) ಟ್ಯಾಪ್ ಮಾಡಿ.
SplitEase ಆ್ಯಪ್ ಇನ್ನೂ ಕನ್ನಡದಲ್ಲಿ ಲಭ್ಯವಿಲ್ಲ. ಆವರಣದಲ್ಲಿರುವ ಬಟನ್ ಹೆಸರುಗಳು ಪರದೆಯ ಮೇಲೆ ನಿಮಗೆ ಇಂಗ್ಲಿಷ್ನಲ್ಲಿ ಕಾಣಿಸುವಂಥವು.